== ಅರೇಹಳ್ಳಿ == ಅರೇಹಳ್ಳಿಯೂ ಹಾಸನ ಜಿಲ್ಲೆ ಬೇಲೂರು ತಾಲ್ಲೂಕಿನಲಿರುವ ಒಂದು ಗ್ರಾಮವಾಗಿದೆ. ಜಿಲ್ಲೆಯಿಂದ ೪೬ ಕಿ ಮೀ ಹಾಗೂ ರಾಜ್ಯ ರಾಜಧಾನಿಯಿಂದ ೨೨೮ ಕಿ ಮೀ ಅಂತರದಲ್ಲಿದೆ. ಸಮುದ್ರ ಮಟ್ಟದಿಂದ ಸುಮಾರು ೯೫೩ ಮೀಟರ್ ಎತ್ತರದಲ್ಲಿದ್ದು ಕಾಫಿ ಇಲ್ಲಿನ ಪ್ರಮುಖ ಬೆಳೆಯಾಗಿದೆ == ಜನಸಂಖ್ಯಾಶಾಸ್ತ್ರ == ೨೦೧೧ನೇ ಜನಗಣತಿಯ ಪ್ರಕಾರ ಅರೇಹಳ್ಳಿಯ ಜನಸಂಖ್ಯೆ ೭೪೬೭. ಅದರಲ್ಲಿ ೩೬೩೭ ಪುರುಷರು ಹಾಗೂ ೩೮೩೦ ಮಹಿಳೆಯರು ಇದ್ದಾರೆ. === ಸಾರಿಗೆ === ಗ್ರಾಮದಲ್ಲಿ ರೈಲು ಮಾರ್ಗವಿಲ್ಲ. ರಸ್ತೆ ಮಾರ್ಗವನೇ ಅವಲಂಬಿಸಿದೆ. ಸಕಲೇಶಪುರದಿಂದ ೧೪ ಕಿ ಮೀ ಹಾಗೂ ಬೇಲೂರುನಿಂದ ೨೨ ಕಿ ಮೀ ಇದ್ದು ಬಸ್ಸಿನ ವ್ಯವಸ್ಥೆ ಇದೆ. ಚಿಕ್ಕಮಗಳೂರು, ಮೂಡಿಗೆರೆ ಹಾಗೂ ಹಾಸನಕ್ಕೆ ತೆರಳಲು ರಸ್ತೆ ಮಾರ್ಗವಿದೆ. == ಕೃಷಿ == ಸ್ಥಳೀಯ ರೈತರು ತಮ್ಮ ತೋಟದಲ್ಲಿ ಕಾಫಿಯನ್ನು ಬೆಳೆಯುತ್ತಾರೆ. ಇದನ್ನು ಅರೇಹಳ್ಳಿ ಕಾಫಿ ಎಂದೇ ಕರೆಯುತ್ತಾರೆ. ಇದರೊಂದಿಗೆ ಕಾಳುಮೆಣಸು, ಶುಂಠಿಯನ್ನು ಬೆಳೆಯುತ್ತಾರೆ. == ಶಿಕ್ಷಣ == ಅರೇಹಳ್ಳಿ ಹಾಸನ ಜಿಲ್ಲೆ ಬೇಲೂರು ಬ್ಲಾಕ್ ನಲ್ಲಿರುವ ಒಂದು ಶಾಲಾ ಕ್ಲಸ್ಟರ್ ಆಗಿದ್ದು, ಇದರಲ್ಲಿ ಸುಮಾರು 22 ಶಾಲೆ ಗಳಿವೆ. ಅರೇಹಳ್ಳಿ ಯೂ ಅನೇಕ ಶಾಲಾ ಕಾಲೇಜುಗಳಿವೆ. == ಆಸ್ಪತ್ರೆಗಳು == ಅರೇಹಳ್ಳಿಯಲ್ಲಿ ಒಂದು ಸಮುದಾಯ ಆರೋಗ್ಯ ಕೇಂದ್ರವಿದೆ ಹಾಗೂ ಪಶು ಆಸ್ಪತ್ರೆ ಇದೆ == ಸಂತೆ ಮತ್ತು ಜಾತ್ರೆ == ಪ್ರತಿ ಸೋಮವಾರ ಅರೇಹಳ್ಳಿಯಲ್ಲಿ ಸಂತೆ ಇರುತ್ತದೆ. ಇಲ್ಲಿಗೆ ಸುತ್ತಮುತ್ತಲಿನ ಹಳ್ಳಿಯ ಜನರು ಬರುತ್ತಾರೆ ಪ್ರತಿ ವರ್ಷ ಮಾರ್ಚ್ ನಲ್ಲಿ ಶನೇಶ್ವರ ಸ್ವಾಮಿ ಜಾತ್ರೆ ನಡೆಯುತ್ತದೆ. ಕೆಂಡಸೇವೆ, ಅನ್ನಸಂತರ್ಪಣೆಯೂ ಇರುತ್ತದೆ.